Tuesday, August 13, 2013

ಸ್ಫೂರ್ತಿ

ಮರೆತೊಂದು ನೆನಪನ್ನು ಮೀಂಟಿ ಮೀಂಟುತ ಮತ್ತೆ
ಕೇಳಲು ಇಂಪಾದ ನಾದವಾಗಿಸು
ಇರದಿದ್ದ ಕನಸುಗಳ ತೋರಿ ತೋರುತ ಮತ್ತೆ
ಇರುಳಿನ ನಶೆಯೊಳಗೆ ತೇಲಿತೇಲಿಸು

ಅವಿತಿಟ್ಟ ಭಾವಗಳ ಹೇಳಿರದ ಗುಟ್ಟುಗಳ
ಒಮ್ಮೆ ತೆರೆದು ತೋರಿಸುತ್ತ ನಿರಾಳವಾಗಿಸು
ಬಂಧದೊಳು ಸಿಲುಕಿದ ಶೂನ್ಯವಾದ ಮನಸ್ಸಿಗೆ
ದಿಕ್ಕುಗಳ ತೋರಿಸುತ್ತ ವಿಷಾದವ ನೀಗಿಸು || ೧||

ಕವಿದಿರುಳಲಿ ತುಂಬು ಬೆಳದಿಂಗಳ
ಮೊಗೆ ಮೊಗೆದೀಯುತ ಬೊಗಸೆಯಲಿ
ಇರದೊಂದು ಕನಸನ್ನು ಇರಗೊಡುತಲಿ ಮತ್ತೆ
ರಾಗಗಳಲೆಯೊಳು ತೇಲಿತೇಲಿಸು || ೨ ||

 

[soundcloud url="https://api.soundcloud.com/tracks/69280433" width="100%" height="166" iframe="true" /]

2 comments:

  1. ಸರ್ ನಿಮ್ಮ ಕವನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯುತ್ತಿಲ್ಲ ಆದರೆ ಒಂದು ಮಾತು ಕೇಳ್ತೇನೆ ಇಂತಹ ಅಸಾಮಾನ್ಯ ಕವನ ಕನ್ನಡ ಕವನದಲ್ಲಿ ಪೋಸ್ಟ್ ಮಾಡುವ ಮೂಲಕ ಕನ್ನಡ ಕವನ ಗ್ರೂಪನ್ನು ಅತಿ ಎತ್ತರದಲ್ಲಿ ನಿಲ್ಲಿಸಿದ್ದೀರಿ ಅನಂತಾನಂತ ಧನ್ಯವಾದಗಳು ನಿಮಗೆ

    ReplyDelete
  2. ನಿಮ್ಮ ಪ್ರೀತಿಗಾಗಿ ಕೃತಜ್ಞತೆಗಳು, ಜಯರಾಮ್.

    ReplyDelete

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...