Tuesday, August 13, 2013

ಕೋಪ-ತಾಪ

couple-hd

ನಿನ್ನನಿಂದು ದ್ವೇಷಿಸಲಾರೆ,
ನಿನ್ನನಿಂದು ಸೈರಿಸಲಾರೆ.
ನಿನ್ನನಿಂದು ತಾಳಲಾರೆ,
ನಿನ್ನನಿಂದು ಅಗಲಿರಲಾರೆ.



ಕಟುವಾದ ಮಾತುಗಳು ,
ನಿನ್ನ ಕಡೆಗಣ್ಣ ನೋಟಗಳು;
ತುಟಿಯಂಚಿನಲ್ಲಿ ಕೆಟ್ಟ ಕಡುಮುನಿಸನು ತರದೇ?
ನಾನಿಂದು ತಾಳದಾದೆ,
ಕೋಪಿಸುತ್ತ ಇದ್ದಿರದಾದೆ;
ಜೇನಿನೊಳದ್ದಿದ ಆ ಕೆಂದುಟಿ ಮತ್ತೆ ಎನ್ನ ಕೋಪವ ಕರಗಿಸದೇ?


ಕಾರಣವ ತಿಳಿಯದಾದೆ,

ನಿನ್ನ ಪೂರ್ತಿ ಅರಿಯದಾದೆ;

ಮುಚ್ಚಿಟ್ಟ ಭಾವನೆ ಮೊಗದಲಿ ಮಡುವನು ಕಟ್ಟಿಸದೇ?

ನೀನೇಕೆ ಮೌನವಾದೆ,

ಮಾತೊಂದ ನುಡಿಯದಾದೆ;

ಎದೆಯೊಳಗಿನ ಮಾತುಗಳನ್ನು ಬಿಚ್ಚಿಡದೆ ಉಳಿದೆ?


ಹೇಳಿಬಿಡು ಕಾರಣವನ್ನು,

ಕಟ್ಟೆಯೊಡೆದು ಹರಿಯಲಿ ಮಾತು;

ನೀನೊರಲಿದ ಅಣಿಮುತ್ತುಗಳೆನಗೆ ಮುಗುಳ್ನಗೆಯನ್ನು ತರವೇ?

ಯುದ್ಧವೀಗ ಏತಕೆ ಬೇಕು,

ಮೃದುಲ ಸ್ಪರ್ಶವೊಂದೇ ಸಾಕು;

ಎಷ್ಟಾದರೂ ಆಗಲಿ ಕೊನೆಗೆ ಹನಿ ಪ್ರೇಮವ ಚಿಮ್ಮಿಸದೇ?


ನಿನ್ನನಿಂದು ದ್ವೇಷಿಸಲಾರೆ,

ನಿನ್ನನಿಂದು ಸೈರಿಸಲಾರೆ.

ನಿನ್ನನಿಂದು ತಾಳಲಾರೆ,

ನಿನ್ನನಿಂದು ಅಗಲಿರಲಾರೆ.

2 comments:

  1. ಯುದ್ಧವೀಗ ಏತಕೆ ಬೇಕು, ಮೃದುಲ ಸ್ಪರ್ಶವೊಂದೇ ಸಾಕು; ಎಷ್ಟಾದರೂ ಆಗಲಿ ಕೊನೆಗೆ ಹನಿ ಪ್ರೇಮವ ಚಿಮ್ಮಿಸದೇ? ಅದ್ಬುತ ರಚನೆ ಇಷ್ಟವಾಯಿತು

    ReplyDelete
  2. ವೆಂಕಟೇಶ್ ರೆಡ್ಡಿಯವರೇ, ನಿಮ್ಮ ಮಾತುಗಳಿಗಾಗಿ ಧನ್ಯವಾದಗಳು.

    ReplyDelete

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್...