Sunday, April 13, 2025

ಮುಸ್ಲಿಂ ಜಾತಿ ಗಣತಿ

 ಮುಸ್ಲಿಂ ಎನ್ನುವುದು ಒಂದೇ ಜಾತಿಯಲ್ಲ. ಜಾತಿಗಣತಿಯಲ್ಲಿ ಮುಸ್ಲಿಂ ಒಂದೇ ಜಾತಿಯೆಂದು ನಮೂದಾಗಿದ್ದರೆ ಗಣತಿಯಲ್ಲಿ ಅನುಸರಿಸಿದ ಮಾನದಂಡಗಳು ತಪ್ಪಾಗಿವೆ. ಒಟ್ಟು ಇಪ್ಪತ್ತೇಳಕ್ಕಿಂತ ಹೆಚ್ಚು ಜಾತಿಗಳು ಭಾರತದಲ್ಲಿ ಚಾಲ್ತಿಯಲ್ಲಿರುವ ಮುಸ್ಲಿಂ ಮತದಲ್ಲಿದ್ದು ಇವುಗಳಲ್ಲಿ ಕನಿಷ್ಠ ಮೂರಾದರೂ ಜಾತಿಗಳು ಕರ್ಣಾಟಕದಲ್ಲಿ ಇರಲೇಬೇಕು. ಜಾತಿಗಳ ಹೆಸರುಗಳು ನವಾಯತ, ಬ್ಯಾರಿ, ಮುಂತಾಗಿ. ಅವುಗಳಲ್ಲಿ ಹನಫಿ ಮತ್ತು ಶಾಫಿ ಸಂಪ್ರದಾಯಗಳ ವ್ಯತ್ಯಾಸ ಇದ್ದೇ ಇದೆ. ಶಾಫಿ ಸುನ್ನಿಗಳಲ್ಲಿ ಮುಜಾಹಿದ್ ವಿಭಾಗವಿದೆ. ಇದನ್ನು ಮುಸಲ್ಮಾನರ ನಡುವಣ ಪ್ರಜ್ಞಾವಂತರು ಒಪ್ಪುತ್ತಾರೆ. ಇನ್ನೂ ಕೆಲವರು ರಾಜಕೀಯ ದೃಷ್ಟಿಯಿಂದ ಎಲ್ಲರೂ ಒಂದೇ ಎನ್ನುವುದು, ಸಾಮಾಜಿಕವಾಗಿ ಬೇರೆ ಎನ್ನುವ ಶೈಲಿಯನ್ನು ಪ್ರಜ್ಞಾವಂತ ಜನಸಮೂಹ ಒಪ್ಪಬಾರದು. ನಿಜವಾದ ಪ್ರಭುತ್ವ ಇರುವುದು ಪ್ರಜೆಗಳ ಕೈಯಲ್ಲಿ ಎಂಬುದನ್ನು ಮನವೆರಿಕೆ ಮಾಡಿಕೊಡಬೇಕು.


No comments:

Post a Comment

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...