ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು
ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾರೆ:
"ಮುಳಿಯ ತಿಮ್ಮಪ್ಪಯ್ಯನವರು ಹೇಳಿದಂತೆ ಕಾಸರಗೋಡು ತಾಲೂಕಿನ ಚಂದ್ರಗಿರಿ ಹೊಳೆಯಿಂದ ಬಡಗಣ ಭಾಗದಲ್ಲಿ (ಕುಂಬಳೆ ಸೀಮೆ) ಹಿಂದಿನಿಂದ ಇಂದಿನವರೆಗೆ ಒಂದೇ ಒಂದು ಮಲೆಯಾಳ ಸಾಹಿತ್ಯ ಗ್ರಂಥವಾಗಲಿ, ಮಲೆಯಾಳ ಶಾಸನವಾಗಲಿ ತಲೆದೋರಿದಂತೆ ಕಂಡುಬರುವುದಿಲ್ಲ. ಬದಲಾಗಿ ಕನ್ನಡ ಯಕ್ಷಗಾನ ಪ್ರಬಂಧಗಳೇ ಮೊದಲಾದ ಉತ್ತಮ ಸಾಹಿತ್ಯ ಗ್ರಂಥಗಳೂ ಹಲವಾರು ಕನ್ನಡ ಶಾಸನಗಳೂ ಉದಯಿಸಿದುದು ಕಂಡುಬರುತ್ತದೆ."
#ಕಾಸರಗೋಡು
No comments:
Post a Comment