ಏಕಾಣ್ಮ ಪಂಚಕಂ - 2
ತಾನು ತಾನಾಗಿರುತ್ತಲೂ ತನ್ನ ಸ್ಥಿತಿಯನ್ನು ಅರಿಯಲಾರದ ಕುಡುಕನಿಗೆ ಸಚ್ಚಿದಾನಂದ ಸ್ಥಿತಿಯನ್ನು ಬದಲಿಯಾಗಿ ಕೊಡು.
---------------------------------------------------------------------------------------------------------------------------

ತಾನಿರುಂದುಂ ತಾನಾಗ ತನ್ನೈತ್ತಾ ನಾನೆವನ್
ಯಾನಿರುಕ್ಕುಂ ಸ್ಥಾನಂ ಎದುವೆನಕ್ಕೇಟ್ ಪಾನುಕ್ಕು
ಯಾನೆವನ್ ಎವ್ವಿಡಂ ಯಾನುಳನ್ ಎಂಡ್ರಮಡು
ಪಾನನೈ ಈಡು ಪಗರ್ ಸಚ್ಚಿದಾನಂದ
ತಾನು ತಾನಾಗಿರುತ ತನಗೆ ತಾನಾರೆಂದೊರಲಿ
ಆನಿರ್ಪ ತಾಣವೆದೆಂದೆಂಬನಿಗೆ
ಆನಾವನೆತ್ತಲಾನಿರ್ಪೆನೆಂಬುದನು
ಪಾನಿಗಮೀಡು ಕೊಡು - ಸಚ್ಚಿದಾನಂದ
ಪದವಿಂಗಡಣೆ:
[ತಾಣ+ಎದು+ಎಂದು+ಎಂಬನಿಗೆ] [ಆನು+ಆವನು+ಎತ್ತಲ್+ಆನ್+ಇರ್ಪೆನು+ಎಂಬುದನು] [ಪಾನಿಗಂ+ಈಡು]
ಅರ್ಥಗಳು:
ಪಾನಿ = ಕುಡುಕ, ಈಡು = ಬದಲಿ, ಪಗರ್ = ಕೊಡು
ವ್ಯಾಖ್ಯಾನ:
ತಾನು ತಾನಾಗಿಯೇ ಇದ್ದಾಗಲೂ ತನ್ನ ನಿಜಸ್ವರೂಪವನ್ನು ಅರಿಯದೆ, “ನಾನು ಯಾರು?”, “ನಾನು ಎಲ್ಲಿರುವೆ?”, “ನಾನು ಹೇಗಿರುವೆ?” ಎಂಬ ಪ್ರಶ್ನೆಗಳನ್ನು ಕೇಳುವ ಅಜ್ಞಾನಿಯಾದ ಆ ಕುಡುಕನಿಗೆ ಆತನ “ನಾನು” ಎಂಬ ಭಾವಕ್ಕೆ ಬದಲಿಯಾಗಿ ಪರಮ ಸತ್ಯವಾದ ಸಚ್ಚಿದಾನಂದ ಸ್ಥಿತಿಯನ್ನು ನೀನು ಕೊಡು!
ತಾತ್ಪರ್ಯ:
ಆತ್ಮಾನುಭವದ ಆ ಸ್ಥಿತಿಯಲ್ಲಿ ಅಹಂಕಾರ ನಾಶಗೊಂಡು, ಪರಿಪೂರ್ಣ ಬೋಧೆಯ ಆನಂದವೊಂದೇ ಉಳಿಯುತ್ತದೆ - ಅದುವೇ ಸಚ್ಚಿದಾನಂದವೆಂಬ ಪರಮ ಸ್ಥಿತಿ.
No comments:
Post a Comment