ರಮಣ ಮಹರ್ಷಿಗಳು ಅದ್ವೈತ ವೇದಾಂತದ ಸಾರವನ್ನು ಬಹಿರಂಗಪಡಿಸಿದ ರೀತಿ ಅನ್ಯಾದೃಶವಾದುದು. ರಮಣ ಮಹರ್ಷಿಗಳ "ಏಕಾಣ್ಮ ಪಂಚಕಂ" ಐದು ಚರಣಗಳಿಂದ ಕೂಡಿದ ಸ್ತೋತ್ರ. ತಮಿಳಿನಲ್ಲಿ 'ಆತ್ಮ' ಪದಕ್ಕೆ 'ಆಣ್ಮ' ಎಂಬ ಪದ ಸಂವಾದಿಯಾಗಿದೆ. ಹೀಗೆ ಐದು ಚರಣಗಳಿಂದ ಕೂಡಿದ ಈ ಸ್ತೋತ್ರವನ್ನು ಕನ್ನಡಕ್ಕೆ ಅನುವಾದಿಸುವ ವಿನಮ್ರ ಪ್ರಯತ್ನ ಇಲ್ಲಿದೆ.
The way Ramana Maharshi represented the essence of Advaita Vedanta is unique. Ramana Maharshi's "Ekanma Panchakam" is a hymn consisting of five stanzas. The word 'Aanma' is the equivalent of the word 'Atma' in Tamil. Thus, here is a humble attempt to translate this hymn consisting of five stanzas into Kannada.
------------------------------------------------------------------------------------------------------------------------
ತನ್ನೈ ಮಱನ್ದ್ ತನುವೇ ತಾನಾ ಎಣ್ಣಿ
ಎಣ್ಣಿಲ್ ಪಿರವಿ ಎಡುತ್ತಿರದಿ - ತನ್ನೈ
ಉಣರ್ನ್ದ್ ತಾನಾದಲ್ ಉಲಕಸಂಚಾರ
ಕನವಿನ್ ವಿೞಿತ್ತಾಲೇ ಕಾಣ್ಗ ಅನವರತಂ
ತನ್ನನೇ ಮರೆತು ತನುವೇ ತಾನೆಂದೆಣಿಸಿ,
ತನ್ನದೇ ಹಲಹೆರಿಗೆಗಳ ದಾಟಿ ;
ಎಚ್ಚೆತ್ತು ತಾನೆಂದರಿತು ಲೋಕಸಂಚಾರವೆನೆ
ಕನವು ಕಳೆಯುತಲದನೆ ಕಾಣ್ಬುದನವರತ.
ಪದವಿಂಗಡಣೆ:
[ಕಳೆಯುತಲಿ+ಅದನೆ] [ಕಾಣ್ಬುದು+ಅನವರತ]
ಅರ್ಥಗಳು:
ತನು = ಶರೀರ, ಹಲಹೆರಿಗೆಗಳ = ಹಲವಾರು ಜನ್ಮಗಳನ್ನು, ಲೋಕಸಂಚಾರವೆನೆ = ಲೋಕಸಂಚಾರವೆಂಬ, ಲೋಕಸಂಚಾರ = ಸಂಸಾರ, ಜನನ ಮರಣ ಚಕ್ರಗಳು, ಕನ = ಕನಸು, ಅನವರತ = ನಿತ್ಯವೂ
ವ್ಯಾಖ್ಯಾನ:
ತನ್ನನ್ನು ತಾನು ಮರೆತು ತನ್ನ ಶರೀರವನ್ನು ತಾನೆಂದು ಬಗೆದು ಹಲವಾರು ಜನ್ಮಗಳನ್ನು ಜೀವನು ದಾಟಿದನು. ಲೋಕಸಂಚಾರವೆಂಬ ಕನಸು ಕಾಣುತ್ತಿದ್ದ ಆ ಜೀವನು ಎಚ್ಚೆತ್ತು ತನ್ನನ್ನು ಅರಿತುಕೊಂಡು ಆ ಸತ್ಯವನ್ನು ನಿತ್ಯವೂ ಕಾಣುವಂತಾಗಲಿ.
ತಾತ್ಪರ್ಯ:
ಜೀವನು ತನ್ನನ್ನು ತಾನು ಮರೆತು ಶರೀರವನ್ನು ‘ನಾನು’ ಎಂದು ಬಗೆದ ಕಾರಣ, ಅನೇಕ ಜನ್ಮಗಳ ಕಾಲ ಸಂಸಾರದ ಕನಸು ಕಾಣುತ್ತಾನೆ. ಆತ್ಮಜ್ಞಾನವನ್ನು ತಂದುಕೊಂಡು ಜಾಗೃತನಾದಾಗ, ಸಂಸಾರವೆಂಬ ಆ ಕನಸು ಮಾಯವಾಗುತ್ತದೆ; ಆ ಜಾಗೃತ ಸ್ಥಿತಿಯಲ್ಲಿ ನಿತ್ಯವೂ ಪರಮಾತ್ಮನೆಂಬ ಸತ್ಯವೇ ಕಾಣುತ್ತದೆ.

No comments:
Post a Comment