Wednesday, August 27, 2025

ತಳಂಗರೆ ಶಿಲಾಶಾಸನ

 ಕಾಸರಗೋಡಿನ ತಳಂಗರೆ ಗ್ರಾಮದಲ್ಲಿರುವ ಶಿಲಾಶಾಸನವೊಂದು ಬರಗಾಲವನ್ನು ಸಮರ್ಥವಾಗಿ ತನ್ನದೇ ಆದ ರೀತಿಯಲ್ಲಿ ಎದುರಿಸಿದ ರಾಣಿಯೊಬ್ಬಳ ಕಥೆಯನ್ನು ಸಾರುತ್ತದೆ.

ವಿಜಯ ಕರ್ನಾಟಕ

ಮೋಚಿಕಬ್ಬೆಯ ಗಂಡ ಜಯಸಿಂಹ ರಾಜ ಅವಳಿಗೆ ಉಡುಗೊರೆಯೊಂದನ್ನು ಕೊಡಬಯಸಿದನು. ಮೋಚಿಕಬ್ಬೆಯ ಇಚ್ಛೆಯೇನೆಂದು ಜಯಸಿಂಹ ರಾಜ ಕೇಳಿದಾಗ ಅವಳು ನಿರ್ಜನವಾದ ಕಲ್ಲು ಮುಳ್ಳುಗಳಿಂದ ಕೂಡಿದ ಬರಪೀಡಿತ ಪ್ರದೇಶವೊಂದಕ್ಕಾಗಿ ಬೇಡಿದಳು. ಮಾತಿಗೆ ತಪ್ಪದ ಜಯಸಿಂಹ ರಾಜ ಅವಳು ಬಯಸಿದಂತೆ ರಾಜಧಾನಿಯಿಂದ ಬಲು ದೂರದಲ್ಲಿದ್ದ ನಿರ್ಜನ ಪ್ರದೇಶವೊಂದನ್ನು ಅವಳಿಗೆ ಉಡುಗೊರೆಯಾಗಿ ನೀಡಿದನು.

ಮೋಚಿಕಬ್ಬೆ ಆ ಭೂಮಿಯನ್ನು ಸ್ವಚ್ಛವಾಗಿಸಿ ನೀರಾವರಿಗಾಗಿ ಕಾಲುವೆಯೊಂದನ್ನು ಅಲ್ಲಿಗೆ ಹರಿಯುವಂತೆ ಮಾಡಿದಳು. ನೀರಿನ ಉಳಿತಾಯಕ್ಕಾಗಿ ಯೋಜನೆಗಳನ್ನು ಹಾಕಿ ಬರಪೀಡಿತ ಭೂಮಿಯನ್ನು ಜನವಾಸಕ್ಕೂ ಕೃಷಿಗೂ ಯೋಗ್ಯವಾಗುವಂತೆ ಪರಿವರ್ತಿಸಿದಳು. ಉದ್ಯಾನಗಳನ್ನೂ ಹಂಚಿನ ಮನೆಗಳನ್ನೂ ನಿರ್ಮಿಸಿ ಅದನ್ನು ಜನರ ಉಪಯೋಗಕ್ಕಾಗಿ ಮೋಚಿಕಬ್ಬೆ ದಾನ ಕೊಟ್ಟಳು.

ಮೇಲ್ಕಂಡ ಶಿಲಾಶಾಸನದಿಂದಲೇ ತಿಳಿದುಬರುವಂತೆ ಆ ಭೂಮಿ ಕಳ್ಳಕಾಕರ ಆಡುಂಬೊಲವಾಯಿತು. ರಾಣಿ ಮೋಚಿಕಬ್ಬೆ ಕೊಲೆ ಕಳ್ಳತನದಂಥ ಅಪರಾಧಗಳನ್ನು ಎಸಗಿದವರಿಗೆ ತಾತ್ಕಾಲಿಕ ಕ್ಷಮಾದಾನವನ್ನೂ ನೀಡಿದ್ದಳು. ರಾಣಿ ಮನುಷ್ಯರ ಮನಸ್ಸನ್ನು ಬಲ್ಲವಳಾಗಿದ್ದಳು. ಅಪರಾಧಗಳನ್ನು ಎಸಗಲು ಪ್ರೇರಣೆಯೊದಗಿಸುವ ವಿಚಾರಗಳನ್ನು ಅರಿತುಕೊಂಡು ಅಪರಾಧಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅನುವಾಗುವ ತಾಣವೊದನ್ನು ರಾಣಿ ಮೋಚಿಕಬ್ಬೆ ಒದಗಿಸಿದಳು. ಶಿಲಾಶಾಸನ ಮುಂದುವರಿದು ಅಪರಾಧಿಗಳು ಅಧಿಕಾರಿಗಳಿಗೆ ಶರಣಾದರೆಂದೂ ರಾಣಿ ಮೋಚಿಕಬ್ಬೆಯಿಂದಲಾಗಿ ರಾಜ್ಯದಲ್ಲಿ ಶಾಂತಿ ನೆಲಸುವಂತಾಯಿತೆಂದೂ ಸಾರುತ್ತದೆ.

ಹೆಚ್ಚಿಗೆ ಓದಲು
*ಡಾ. ಜ್ಯೋತ್ಸ್ನಾ ಕಾಮತ್ http://www.kamat.com/jyotsna/blog/blog.php?BlogID=452

*ಪಿ. ಗುರುರಾಜ ಭಟ್ (1975). Studies in Tuluva History and Culture.

*ಡಾ. ಸದಾನಂದ ಪೆರ್ಲ - ಕಾಸರಗೋಡಿನ ಕನ್ನಡ ಹೋರಾಟ , ಕನ್ನಡ ಪುಸ್ತಕ ಪ್ರಾಧಿಕಾರ 

*ವಿಜಯ ಕರ್ನಾಟಕ https://vijaykarnataka.com/news/kasaragod/kasaragod-news-in-kannada/articleshow/58240024.cms



No comments:

Post a Comment

ಅಹ್ಮದಿಯಾ ಮುಸ್ಲಿಂ ಜಮಾಯತ್

 ಅಹ್ಮದಿಯಾ ಮುಸ್ಲಿಂ ಜಮಾಯತ್ (ಭಾರತದ ಅಹ್ಮದಿಯಾ ಸಂಘಟನೆ) ಚೌಧರಿ ಜಾಪರುಲ್ಲಾ ಖಾನ್ ಮುಂತಾದವರ ನೇತೃತ್ವದಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿತು, ...