Sunday, August 24, 2025

ಮಹಾರಾಜ ಶುದ್ಧೋದನ ಮತ್ತು ಮಹಾರಾಣಿ ಮಾಯಾದೇವಿ

 ಶಾಕ್ಯ ಜನಾಂಗದ ರಾಜ ಶುದ್ಧೋದನನು ಅನೇಕ ರಾಣಿಯರನ್ನು ಮದುವೆಯಾಗಿದ್ದನು. ಅವರಲ್ಲಿ ಅವನಿಗೆ ಅತ್ಯಂತ ಪ್ರಿಯವಾದವಳು ಮಾಯಾದೇವಿ.

ಅವಳು ಅತ್ಯಂತ ಸುಂದರಿಯಾಗಿದ್ದಳು. ಲಕ್ಷ್ಮಿಯೇ ದಾರಿ ತಪ್ಪಿ ಭೂಲೋಕಕ್ಕಿಳಿದಂತೆ ಅವಳಿದ್ದಳು. ಅವಳ ಮಾತುಗಳು ವಸಂತಕಾಲದ ಹಕ್ಕಿಗಳ ಕಲರವವಾಗಿದ್ದುವು. ಅವಳ ಬೆನ್ನಿಗೆ ಇಳಿಯಬಿಡಲ್ಪಟ್ಟಿದ್ದ ಹೆಣೆದ ಕೂದಲಿನ ಜಡೆ ಸುಗಂಧಗಳನ್ನು ಸೂಸುವ ಹೂವುಗಳಿಂದ ಅಲಂಕೃತವಾಗಿತ್ತು. ಅವಳ ಹಣೆ ವಜ್ರದಂತೆ ಪರಿಶುದ್ಧವಾಗಿತ್ತು. ಅವಳ ಕಣ್ಣುಗಳು ಕಮಲದ ಹೂವುಗಳನ್ನು ಹೋಲುತ್ತಿದ್ದುವು. ಅವಳ ಸೊಗಸಾದ ಹುಬ್ಬುಗಳ ವಕ್ರರೇಖೆ ರಾಜನಿಗೆ ಅತ್ಯಂತ ಆಪ್ಯಾಯಮಾನವಾಗಿತ್ತು. ಅವಳ ಬೆರಳುಗಳು ಕಮಲದ ಮೊಗ್ಗುಗಳೇ ತಾವಾಗಿದ್ದುವು.

ಮಾಯಾದೇವಿ ಗುಣವಂತೆ; ಅವಳು ಸದಾ ತನ್ನ ಪ್ರಜೆಗಳ ಸುಖವನ್ನು ಬಯಸುತ್ತಿದ್ದವಳು. ಅವಳು ತನ್ನ ಕುಲಗುರುಗಳ ಆಜ್ಞೆಗಳನ್ನು ಎಂದಿಗೂ ಮೀರಿದವಳಲ್ಲ. ಅವಳು ಸತ್ಯಕ್ಕೆ ನಿಷ್ಠಳಾಗಿದ್ದಳು ಮತ್ತು ಧರ್ಮದ ಹಾದಿಯಲ್ಲಿ ನಡೆಯುವವಳಾಗಿದ್ದಳು. ಇಂತು ಮಹಾರಾಜ ಶುದ್ಧೋದನ ಮತ್ತು ಮಹಾರಾಣಿ ಮಾಯಾದೇವಿ ಕಪಿಲವಸ್ತುವಿನಲ್ಲಿ ಶಾಂತವಾಗಿಯೂ ಸಂತೋಷದಿಂದಲೂ ಜೀವಿಸುತ್ತಲಿದ್ದರು.

No comments:

Post a Comment

ಅಹ್ಮದಿಯಾ ಮುಸ್ಲಿಂ ಜಮಾಯತ್

 ಅಹ್ಮದಿಯಾ ಮುಸ್ಲಿಂ ಜಮಾಯತ್ (ಭಾರತದ ಅಹ್ಮದಿಯಾ ಸಂಘಟನೆ) ಚೌಧರಿ ಜಾಪರುಲ್ಲಾ ಖಾನ್ ಮುಂತಾದವರ ನೇತೃತ್ವದಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿತು, ...