Friday, August 28, 2026

ಬೋಟ್ಸಪ್ ಪ್ರೊಫೆಸರ್

ಬೋಟ್ಸಪ್ ಪ್ರೊಫೆಸರ್

 



ಶಾಸ್ತ್ರ ಪುರಾಣವ ಕಲಿಯಲು ಹೊರಟೆ
ಪದಪಾಠಕು ಮುನ್ನವೆ ಬೇಸತ್ತು ಹೋದೆ
 
ಅರಿವುದ ಮುನ್ನವೆ ಮರೆಯಿತು ಬೇಗ
ಕಲಿವುದ ನಿಲ್ಲಿಸಿ ದುಡಿಮೆಗೆ ಹೊರಟೆ
 
ಪ್ರೊಫೆಸರಾಽಬೇಕೆಂದೆಳವೆಯ ಕನಸು
ಕೊನೆಗೂ ಆದೆನು ಬೋಟ್ಸಪ್ಪಿನೊಳಗೆ!
 
ಅಡೆತಡೆಯಿಲ್ಲದೆ ಕಳುಹುವೆ ವೋಯ್ಸ್ಗಳ
ಒಪ್ಪಿಗೆ ದೊರೆವುದು ಮಿತ್ರಮಂಡಲದೊಳಗೆ!

No comments:

Post a Comment

ರಾಮಧ್ಯಾನ

 ರಾಮಧ್ಯಾನ ಕವಿತೆ: ರಾಮಧ್ಯಾನ ರಚನೆ: ಕೃಷ್ಣಪ್ರಕಾಶ ಬೊಳುಂಬು ನೆನೆವುದು ಮೊದಲಿಗೆ ಸಿರಿರಾಮನನು, ಕೂಡೆಯೆ ನೆನೆವುದು ಸೀತೆಯನು, ನೆನೆವುದು ಕೂಡೆಯೆ ಹನುಮಂತನನು, ಕೂಡೆಯೆ ...