ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||
ಮೂಡಬಾಂದಳದೆ ತೇರನ್ನೇರಿದ ಆದಿತ್ಯದೇವನ ಸಂಗದೆ |
ಓಡೆ ಓಟವನ್ನು ಮಾಡೆ ಮಾಟವನ್ನು ಹೂಡೆ ಹೂಟವನ್ನು | ಬಿಡುವಿರದೆ ||
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಜವ್ವನವ ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮುಪ್ಪು ಬಾರದೊಲರಳಿಸು ||
ಕೞೆದುಹೋಗಿಹ ದಿನಗಳೆಲ್ಲದರ ಆನಂದವ ಕೊಡು ಹಿಂದಕ್ಕೆ |
ಕಾಣುತ್ತಿದ್ದರೂ ಕೈಗೆ ಎಟಕದ ಕನಸನ್ನೂ ಕೊಡು | ಬಿಡುವಿರದೆ ||
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||
ಪಡುವ ಬಾಂದಳದೆ ತೇಲುತ್ತಿಪ್ಪ ಆ ತುಂಬುತಿಂಗಳ ಚಂದದೆ |
ಸುರಿಯುತ್ತಿದ್ದರೂ ಮೆಯ್ಗೆ ಸೋಕದ ಬೆಳ್ವೊನಲನ್ನು ಕೊಡು | ಬಿಡುವಿರದೆ ||
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||
ಭೂತಕಾಲದ ಭವಿತನಿಧಿಗಳ ಕಳೆದುಹೋದ ಕೀಲಿಗೊಂಚಲನ್ನು |
ಒಮ್ಮೆ ತಂದುಕೊಡು ಒಮ್ಮೆ ತಂದುಕೊಡು ಒಮ್ಮೆ ತಂದುಕೊಡು ದಯೆಯಿರಲಿ ||
[soundcloud url="https://api.soundcloud.com/tracks/86460112" width="100%" height="166" iframe="true" /]
Subscribe to:
Post Comments (Atom)
ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ
ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್...
-
ರಮಣ ಮಹರ್ಷಿಗಳು ಅದ್ವೈತ ವೇದಾಂತದ ಸಾರವನ್ನು ಬಹಿರಂಗಪಡಿಸಿದ ರೀತಿ ಅನ್ಯಾದೃಶವಾದುದು. ರಮಣ ಮಹರ್ಷಿಗಳ "ಏಕಾಣ್ಮ ಪಂಚಕಂ" ಐದು ಚರಣಗಳಿಂದ ಕೂಡಿದ ಸ್ತೋತ್ರ. ...
-
Appeasement and the Mirage of Harmony: Lessons from History Across Indian history, well-intentioned efforts to create harmony through com...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...
ತುಂಬಾ ದಿನಗಳ ನಂತರ ಒಂದು ಸುಂದರ ನವೋದಯ ಕಾವ್ಯ ಓದಿದ ಅನುಭವ ನನಗೆ ಆಯಿತು. ತಮ್ಮ ದಯೆಯಿಂದ ನಾನು ಒಮ್ಮೆ ಬಾಲ್ಯಕ್ಕೆ ಹಿಂದಿರುಗಿ ಬಂದೆ...
ReplyDeletemy blog:
www.badari-poems.blogspot.com
ನಿಮ್ಮ ಪ್ರೀತಿಗಾಗಿ ಕೃತಜ್ಞತೆಗಳು, ಬದರಿನಾಥ ಅವರೇ. ನಿಮ್ಮ ಕವನಗಳೂ ಚೆನ್ನಾಗಿವೆ.
ReplyDelete