ರಾಜ್ಯಾಂಗ ವ್ಯವಸ್ಥೆಯಲ್ಲಿ ರಾಜ್ಯ ಸರಕಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿರುವ ವ್ಯವಸ್ಥೆಯನ್ನು ಫೆಡರಲ್ ವ್ಯವಸ್ಥೆ ಎನ್ನಲಾಗುತ್ತದೆ ಮತ್ತು ಕೇಂದ್ರ ಸರಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರುವ ವ್ಯವಸ್ಥೆಯನ್ನು ಏಕೀಕೃತ ರಾಜ್ಯಾಂಗ ವ್ಯವಸ್ಥೆ ಅಥವಾ ಯುನಿಟರಿ ಸ್ಟೇಟ್ ಎನ್ನಲಾಗುತ್ತದೆ.
ಭಾರತದ ಏಕೀಕೃತ ರಾಜ್ಯಾಂಗ ವ್ಯವಸ್ಥೆಯಲ್ಲಿ ಫೆಡರಲ್ ಅಂಶಗಳನ್ನು ಸೇರಿಸಿಕೊಳ್ಳಲಾಗಿದೆಯೇ ಹೊರತು ಸಹಜವಾದ ಫೆಡರಲ್ ವ್ಯವಸ್ಥೆ ಭಾರತಕ್ಕಿಲ್ಲ. ಹೀಗಾಗಿಯೇ ಅಮೇರಿಕನ್ ಫೆಡರಲ್ ವ್ಯವಸ್ಥೆಯ ಬಗೆಗೆ ಅಮೇರಿಕದ ಹಿಂದಿನ ಅಧ್ಯಕ್ಷರಾದ ಜೇಮ್ಸ್ ಮೇಡಿಸನ್ ಏನು ಹೇಳಿದರೆಂಬುದು ಭಾರತದ ಸನ್ನಿವೇಶದಲ್ಲಿ ಅಪ್ರಸ್ತುತವೆನಿಸುತ್ತದೆ. ಯಾಕೆಂದರೆ ಅಮೇರಿಕದಲ್ಲಿ ಹಲವಾರು ಸ್ವತಂತ್ರ ರಾಜ್ಯಗಳು ಒಟ್ಟುಗೂಡಿ ಒಂದು ದೇಶವಾದುವು. ಭಾರತದಲ್ಲಿ ಇದು ಹೀಗೆ ಇಲ್ಲ. ತಮಿಳುನಾಡಿನ ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಫೆಡರಲ್ ವ್ಯವಸ್ಥೆಯ ಬಗೆಗೆ ಜೇಮ್ಸ್ ಮೇಡಿಸನ್ ಅವರ ಚಿಂತನೆಯನ್ನು ಉಲ್ಲೇಖಿಸಿದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಭಾರತದ ರಾಜ್ಯಾಂಗ ವ್ಯವಸ್ಥೆಯಲ್ಲಿ ಫೆಡರಲ್ ಅಂಶಗಳನ್ನು ಸೇರಿಸಿಕೊಂಡುದು ಆಡಳಿತವನ್ನು ಸರಳಗೊಳಿಸುವ ಉದ್ದೇಶದಿಂದಲೇ ಹೊರತು ಹಲವಾರು ರಾಜ್ಯಗಳು ಒಟ್ಟುಗೂಡಿ ಮಾಡಿಕೊಂಡ ವ್ಯವಸ್ಥೆ ಇಲ್ಲಿಲ್ಲ ಎಂಬುದು ಗಮನಾರ್ಹ.
#ಏಕೀಕೃತ ರಾಜ್ಯಾಂಗ ವ್ಯವಸ್ಥೆ #ಫೆಡರಲ್ ವ್ಯವಸ್ಥೆ #ಏಕೀಕೃತ ರಾಜ್ಯಾಂಗ ವ್ಯವಸ್ಥೆ #ಯುನಿಟರಿ ಸ್ಟೇಟ್
No comments:
Post a Comment