Saturday, October 5, 2024

ಕಟ್ಟಲೆಡೆಗೊಡುವ ದಾರಿಯೆನಗಿರಲಿ

 ಮತಪಂಥಗಳ ಮೂಲತತ್ವಗಳನ್ನು ಅರಿತು ಜೀವಿತದಲ್ಲಿ ಸನ್ಮಾರ್ಗಗಳನ್ನು ರೂಪಿಸಿಕೊಳ್ಳುವ ಸಾಧ್ಯತೆ ನಿಚ್ಚಳವಿದ್ದಾಗಲೂ ಅದರಲ್ಲಿರಬಹುದಾದ ಕುಂದುಕೊರತೆಗಳನ್ನು ನೀಗಿಸಿಕೊಳ್ಳಲಾಗದೆ ತೀವ್ರಗಾಮಿತ್ವಗಳನ್ನಳವಡಿಸಿಕೊಳ್ಳುವ ದಾರಿ ಕೆಡವಲೆಡೆಗೊಡುವ ದಾರಿ, ಅದು ಕಟ್ಟಲೆಡೆಗೊಡುವ ದಾರಿಯಾಗಿರದು.


2 comments:

  1. ಕಟ್ಟಲೆಡೆಗೊಡುವ ದಾರಿ ಎನಗಿರಲಿ.
    ಅತ್ಯುತ್ತಮ ಸಂದೇಶ.
    ಯಾವುದೇ ಧರ್ಮ, ಪಂಥ, ಅನುಸರಣೆಗಳಿರಲಿ, ಅದು ಬೆಸೆಯಬೇಕು, ಬೆಳೆಸಬೇಕು ಹೊರತು‌ ಹೊಸಕಬಾರದು.

    ReplyDelete
  2. @TRS,

    ನಿಮ್ಮ ಬಿಚ್ಚು ಮನಸ್ಸಿನ ಮಾತುಗಳು ಓದುವವರಿಗೆ ಹುಮ್ಮಸ್ಸು ಮೂಡಿಸುವಂತಿವೆ. ಸಹಕಾರ ನಿರಂತರವಿರಲಿ, ಧನ್ಯವಾದಗಳು.

    ReplyDelete

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...